ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕರ್ನಾಟಕ ಸರ್ಕಾರ

ಸುದ್ದಿ ಮತ್ತು ಘಟನೆಗಳು

ನಮ್ಮ ಬಗ್ಗೆ

ಸ್ವಾತಂತ್ರ್ಯಾನಂತರ ಭಾಷಾವಾರು ಪ್ರಾಂತ್ಯ ರಚನೆಯು ಜಾರಿಗೊಂಡು, ಕನ್ನಡಿಗರ ರಾಜ್ಯಕ್ಕೆ ಪ್ರತ್ಯೇಕ ಆಸ್ತಿತ್ವ ದೊರೆತು, ಕನ್ನಡಿಗರ ನಾಡು, ನುಡಿ, ಸಂಸ್ಕೃತಿ ಕುರಿತ ಕನಸುಗಳು ಕುಡಿಯೊಡೆಯತೊಡಗಿದಂತೆ, ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯ ಸಂರಕ್ಷಣೆ, ಸಂವರ್ಧನೆಗೆ ಪ್ರತ್ಯೇಕವಾದ ಇಲಾಖೆಯೊಂದು ಅತ್ಯಗತ್ಯವೆನಿಸಿತು. ಕರ್ನಾಟಕದ ದೂರದರ್ಶಿ ಮುಖ್ಯಮಂತ್ರಿ ಎಂದು ಹೆಸರಾದ ದಿ|| ಕೆಂಗಲ್ ಹನುಮಂತಯ್ಯನವರು ಕನ್ನಡ ಸಾಹಿತ್ಯ ಸಂಸ್ಕೃತಿಯ ಪುರೋಭಿವೃದ್ಧಿಗಾಗಿ 1951ರಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯನ್ನು ಸ್ಥಾಪಿಸಿದರು. ಪ್ರಸಿದ್ಧ ವಿದ್ವಾಂಸರಾದ ಸಿ.ಕೆ. ವೆಂಕಟರಾಮಯ್ಯ ಇಲಾಖೆಯ ಮೊಟ್ಟಮೊದಲ ನಿರ್ದೇಶಕರು. ಅನಂತರ ಇಲಾಖೆಯ ನೇತೃತ್ವವನ್ನು ವಹಿಸಿಕೊಂಡ, ಕನ್ನಡದ ಪ್ರಸಿದ್ಧ ಲೇಖಕರಾದ ಪ್ರೋ. ಎ.ಎನ್.ಮೂರ್ತಿರಾವ್ ಅವರು ಸಂಸ್ಕೃತಿ ಪ್ರಚಾರ ಯೋಜನೆಯನ್ನು ರೂಪಿಸಿ, ರಾಜ್ಯದ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ಭದ್ರವಾದ ಬುನಾದಿಯನ್ನು ಹಾಕಿದರು. ನಂತರ ಇಲಾಖೆಯು ದಕ್ಷ ಆಡಳಿತಗಾರರಾದ ಶ್ರೀ ಕೆ.ಎಸ್.ಧರಣೇಂದ್ರಯ್ಯ ಅವರ ಅವಧಿಯಲ್ಲಿ ಮತ್ತಷ್ಟು ಅಭಿವೃದ್ಧಿ ಹೊಂದಿತು. 1963ರಲ್ಲಿ ಸರ್ಕಾರವು ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಇಲಾಖೆಯನ್ನು ರದ್ದುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಒಂದು ಶಾಖೆಯನ್ನಾಗಿ ರೂಪಿಸಿತು. 1968ರಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಎಂಬ ಈ ಶಾಖೆಯನ್ನು ಪಠ್ಯ ಪುಸ್ತಕ ನಿರ್ದೇಶನಾಲಯಕ್ಕೆ ವರ್ಗಾಯಿಸಲಾಯಿತು.

ಮತ್ತಷ್ಟು ಓದಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳು

×
ABOUT DULT ORGANISATIONAL STRUCTURE PROJECTS