ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕರ್ನಾಟಕ ಸರ್ಕಾರ

Back
ಸಾಂಸ್ಕೃತಿಕ ಸಂಘ-ಸಂಸ್ಥೆ

ಸಾಂಸ್ಕೃತಿಕ ಸಂಘ-ಸಂಸ್ಥೆಗಳಿಗೆ ಧನಸಹಾಯ

ಕನ್ನಡ ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಘ-ಸಂಸ್ಥೆಗಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಧನಸಹಾಯವನ್ನು ನೀಡಲಾಗುತ್ತಿದೆ. ಹೀಗೆ ಧನಸಹಾಯ ಮಂಜೂರಾತಿ ಮಾಡಲು ಕೆಲವು ನಿರ್ದಿಷ್ಠ ಮಾನದಂಡಗಳನ್ನು ವಿಧಿಸಿ, ನಿಯಮಾನುಸಾರ ಅರ್ಹವಾದ ಸಂಘ-ಸಂಸ್ಥೆಗಳಿಂದ ಜಿಲ್ಲಾ ಹಂತಗಳಲ್ಲಿ ಅರ್ಜಿ ಅಹ್ವಾನಿಸಿ, ಪರಿಶೀಲಿಸಿ, ಯೋಜನೆ ಮತ್ತು ಸಂಸ್ಥೆಯ ಕಾರ್ಯಕ್ಷಮತೆಯ ಆಧಾರದಲ್ಲಿ ಧನಸಹಾಯ ಮಂಜೂರಾತಿ ಮಾಡಲು ಅನುದಾನ ಮಂಜೂರಾತಿ ಸಮಿತಿ ರಚಿಸಲಾಗಿದೆ.

ಪ್ರತಿ ವರ್ಷ ಸುಮಾರು 1000ಕ್ಕೂ ಹೆಚ್ಚಿನ ಸಂಘ- ಸಂಸ್ಥೆಗಳಿಗೆ ಅವುಗಳ ಚಟುವಟಿಕೆ ನಡೆಸಲು ಧನಸಹಾಯ , ಚಿತ್ರ ಕಲಾವಿದರು ಮತ್ತು ಶಿಲ್ಪ ಕಲಾವಿದರಿಗೆ ಅವರ ಕೃತಿಗಳ ಪ್ರದರ್ಶನ ನಡೆಸಲು ಧನಸಹಾಯ, ಅಸಂಘಟಿತ ಜನಪದ ಮತ್ತು ಸಂಗೀತ ಕಲಾವಿದರಿಗೆ ವಾದ್ಯ ಪರಿಕರ ಮತ್ತು ವೇಷ ಭೂಷಣ ಖರೀದಿಗೆ ಧನಸಹಾಯ ಹೀಗೆ ವಿವಿಧ ಪ್ರಕಾರಗಳಲ್ಲಿ ಮನವಿಗಳನ್ನು ಪರಿಶೀಲಿಸಿ ಧನಸಹಾಯ ನೀಡಲಾಗುತ್ತದೆ.

×
ABOUT DULT ORGANISATIONAL STRUCTURE PROJECTS