ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕರ್ನಾಟಕ ಸರ್ಕಾರ

Back
ವೃತ್ತಿ ರಂಗಭೂಮಿಗೆ ಕಾಯಕಲ್ಪ

ವೃತ್ತಿ ರಂಗಭೂಮಿಯು ಕಲೆಯನ್ನೇ ಜೀವನೋಪಾಯವಾಗಿ ನಂಬಿ ಬದುಕುತ್ತಿರುವ ಕಲಾವಿದರ ಸಮೂಹ ಸಂಸ್ಥೆಗಳು. ಕಾಲಾಂತರದಲ್ಲಿ ಆಧುನಿಕತೆಯ ಭರಾಟೆಗೆ ಸಿಲುಕಿ, ನಿರ್ವಹಣೆಯ ಹೊರೆಯನ್ನು ಭರಿಸಲಾಗದೆ ತೊಳಲಾಡಿದ ಹಲವಾರು ವೃತ್ತಿ ರಂಗಭೂಮಿ ಕಂಪೆನಿಗಳನ್ನು ರಕ್ಷಿಸಿ, ವೃತ್ತಿ ರಂಗಭೂಮಿ ಕಲಾಪ್ರಕಾರವನ್ನು ರಕ್ಷಿಸುವ ಸಲುವಾಗಿ ಈ ಕಾಯಕಲ್ಪ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಹತ್ತು ವರ್ಷಗಳ ಕಾಲ ನಿರಂತರವಾಗಿ ಚಾಲ್ತಿಯಲ್ಲಿರುವ ಮತ್ತು ಹತ್ತು ವರುಷಗಳ ಹಿಂದೆ ಸ್ಥಾಪಿತವಾಗಿ ಸ್ಥಿತ್ಯಂತತರಗಳ ಕಾರಣ ಕುಂಠಿತಗೊಂಡ ಕಂಪೆನಿಗಳ ಪುನರ್ ಅಭಿವೃದ್ಧಿಗಾಗಿ, ಕಲಾವಿದರ ಊಟ, ವಸತಿ, ವಾದ್ಯ ಪರಿಕರ ಖರೀದಿ ಹೀಗೆ ಅಗತ್ಯ ಕಾರ್ಯಗಳಿಗಾಗಿ ಬಳಸಲು ಅವಕಾಶವಿದೆ.

 
 
×
ABOUT DULT ORGANISATIONAL STRUCTURE PROJECTS