ಕರ್ನಾಟಕ ಸರ್ಕಾರ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

Back
ದಾನಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ

‘ದಾನಚಿಂತಾಮಣಿ ಅತ್ತಿಮಬ್ಬೆ’ ಪ್ರಶಸ್ತಿ ಪಡೆದಿರುವ ಪುರಸ್ಕೃತರ ವಿವರ

ಕರ್ನಾಟಕದ ಸಾಹಿತ್ಯ-ಸಂಸ್ಕೃತಿಯ ಇತಿಹಾಸದಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆಯ ಕೊಡುಗೆ ಅನನ್ಯ. ಜೈನ ಗ್ರಂಥದ ಸಹಸ್ರ ಪುಸ್ತಕಗಳನ್ನು ಬರೆಯಿಸಿ, ಧರ್ಮ ಹಾಗೂ ಸಾಹಿತ್ಯದ ಪ್ರಚಾರ ಕೈಗೊಂಡದ್ದು ವಿಶ್ವದಲ್ಲೇ ಅಪರೂಪದ ಪ್ರಸಂಗ. ಸ್ತ್ರೀಯರ ಸಾಹಿತ್ಯ ಕೃಷಿ ಅಗಾಧವಾಗಿ ಸೃಜನೆಯಾಗುತ್ತಿರುವ ಸಂದರ್ಭದಲ್ಲಿ ಅವರಿಗೆ ಪ್ರತ್ಯೇಕ ಪ್ರಶಸ್ತಿ ನೀಡಿ ಗೌರವಿಸಬೇಕೆಂಬ ಉದ್ದೇಶದಿಂದ ಅತ್ತಿಮಬ್ಬೆ ಹೆಸರಿನಲ್ಲಿ 1995ರಿಂದ ಸ್ಥಾಪನೆಗೊಂಡ ಮಹಿಳಾ ಸಾಹಿತಿಗಳಿಗೆ ಕೊಡಮಾಡುವ ಪ್ರಶಸ್ತಿ ಇದು. ಪ್ರಶಸ್ತಿಯು ಪ್ರಶಸ್ತಿ ಪುತ್ಥಳಿ, ಫಲಕ, ಶಾಲು, ಹಾರ ಹಾಗೂ ರೂ.5.೦೦ ಲಕ್ಷ(ಐದು ಲಕ್ಷ ರೂಪಾಯಿ)ಗಳ ನಗದನ್ನು ಒಳಗೊಂಡಿರುತ್ತದೆ. ಇದುವರೆವಿಗೆ ಈ ಪ್ರಶಸ್ತಿಯನ್ನು ಕೆಳಕಂಡ ಮಹನೀಯರು ಪಡೆದಿರುತ್ತಾರೆ.

ಕ್ರಮ ಸಂಖ್ಯೆ

ಹೆಸರು

ವರ್ಷ

1.

ಶ್ರೀಮತಿ ಟಿ. ಸುನಂದಮ್ಮ

1995

2.

ಶ್ರೀಮತಿ ಶಾಂತಾದೇವಿ ಮಾಳವಾಡ

1996

3.

ಶ್ರೀಮತಿ ವೈದೇಹಿ (ಜಾನಕಿ ಶ್ರೀನಿವಾಸಮೂರ್ತಿ)

1997

4.

ಡಾ: ಕಮಲಾ ಹಂಪನಾ

1998

5.

ಶ್ರೀಮತಿ ಮಲ್ಲಿಕಾ ಕಡಿದಾಳ್

1999

6.

ಶ್ರೀಮತಿ ಜಯಲಕ್ಷ್ಮಿ ಶ್ರೀನಿವಾಸನ್

2000

7.

ಶ್ರೀಮತಿ ಸಾರಾ ಅಬೂಬಕರ್

2001

8.

ಡಾ: ಗೀತಾ ನಾಗಭೂಷಣ

2002

9.

ಡಾ: ಶೈಲಜಾ ಉಡಚಣ

2003

10.

ಡಾ: ಎಂ. ಸುನೀತಾ ಶೆಟ್ಟಿ

2004

11.

ಡಾ: ವೀಣಾ ಶಾಂತೇಶ್ವರ

2005

12.

ಶ್ರೀಮತಿ ಬಿ.ಟಿ. ಲಲಿತಾ ನಾಯಕ್

2006

13.

ಶ್ರೀಮತಿ ಶಶಿಕಲಾ ವೀರಯ್ಯ ಸ್ವಾಮಿ

2007

14.

ಡಾ: ವಿಜಯಾ ದಬ್ಬೆ

2008

15.

ಶ್ರೀಮತಿ ಶಾಂತಾದೇವಿ ಕಣವಿ, ಧಾರವಾಡ

2009

16.

ಶ್ರೀಮತಿ ಸುಧಾ ಮೂರ್ತಿ, ಬೆಂಗಳೂರು

2010

17.

ಡಾ. ಸರಸ್ವತಿ ಚಿಮ್ಮಲಗಿ, ವಿಜಾಪುರ

2011

18.

ಡಾ. ಬಿ.ಎನ್. ಸುಮಿತ್ರಾಬಾಯಿ, ಬೆಂಗಳೂರು

2012

19.

ಶ್ರೀಮತಿ ಎಂ.ಸರಸ್ವತಿಗೌಡ, ಮಂಡ್ಯ

2013

20.

ಡಾ ಎಚ್.ಎಸ್.ಶ್ರೀಮತಿ, ಬೆಂಗಳೂರು

2014

21.

ಡಾ. ನೇಮಿಚಂದ್ರ, ಬೆಂಗಳೂರು

2015

22.

ಶ್ರೀಮತಿ ಶಾಂತಿ ನಾಯಕ, ಉತ್ತರ ಕನ್ನಡ

2016

23.

ಶ್ರೀಮತಿ ಸ. ಉಷಾ, ಶಿವಮೊಗ್ಗ

2017

24.

ಶ್ರೀಮತಿ ಹೆಚ್ ಎಂ ಬೀಳಗಿ

2018

×
ABOUT DULT ORGANISATIONAL STRUCTURE PROJECTS