ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕರ್ನಾಟಕ ಸರ್ಕಾರ

Back
75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ

 

ರಂಗಾಯಣ ಧಾರವಾಡ - ಅಮೃತ ಮಹೋತ್ಸವ

ದಿನಾಂಕ: 26-09-2021 ರಂದು ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ರಂಗಾಯಣದ ಪಂ.ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಸರ್ವರಿಗೂ ಸಂವಿಧಾನ ನಾಟಕ ಪ್ರದರ್ಶನವನ್ನು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರಾದ ಉಮೇಶ ಅಡಿಗ ಅವರು ಉದ್ಘಾಟಿಸಿದರು.

ಸರ್.ಸಿದ್ದಪ್ಪ ಕಂಬಳಿ ಕಾನೂನು ಮಹಾವಿದ್ಯಾಲಯದ ಸಹಪ್ರಾಧ್ಯಾಪಕಿ ಡಾ.ಎಸ್.ಆರ್ ಮಂಜುಳಾ, ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯರಾದ ವ್ಹಿ.ಡಿ ಕಾಮರೆಡ್ಡಿ, ಹಿರಿಯ ನ್ಯಾಯವಾದಿ ಡಾ. ಲೋಹಿತ ನಾಯ್ಕರ, ಆಹಾರ ಪೂರೈಕೆ ಮತ್ತು ನಾಗರಿಕ ಸರಬರಾಜು ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಡಾ.ಸದಾಶಿವ ಮರ್ಜಿ, ನ್ಯಾಯವಾದಿ ಕೆ.ಎಚ್ ಪಾಟೀಲ, ಸಾಮಾಜಿಕ ಹೋರಾಟಗಾರರಾದ ಲಕ್ಷ್ಮಣ ಬಕ್ಕಾಯಿ, ಸಾಹಿತಿ ಮಹಾದೇವ ದೊಡಮನಿ, ನಾಟಕ ರಚನಾಕಾರರಾದ ಡಾ. ಟಿ.ಎಂ ಭಾಸ್ಕರ, ರಂಗಸಮಾಜ ಸದಸ್ಯರಾದ ಹಿಪ್ಪರಗಿ ಸಿದ್ಧರಾಮ ಅವರು ಉಪಸ್ಥಿತರಿದ್ದರು.

ರಂಗಾಯಣದ ನಿರ್ದೇಶಕರಾದ ರಮೇಶ ಪರವಿನಾಯ್ಕರ ಅವರು ಅಧ್ಯಕ್ಷತೆ ವಹಿಸಿದ್ದರು. ರಂಗಾಯಣದ ಜಂಟಿ ನಿರ್ದೇಶಕರಾದ ಬಸವರಾಜ ಹೂಗಾರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಫಕ್ಕಿರಪ್ಪ ಹಾಗೂ ಸ್ಮಿತಾ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.

ಡಾ.ಟಿ.ಎಂ ಭಾಸ್ಕರ ರಚಿಸಿ, ಬಾಬಾಸಾಹೇಬ ಕಾಂಬಳೆ ನಿರ್ದೇಶಿಸಿದ ಸರ್ವರಿಗೂ ಸಂವಿಧಾನ ನಾಟಕವನ್ನು ಪ್ರದರ್ಶಿಸಿದರು.

 

     

 

 

75 ನೇ ಸ್ವಾತಂತ್ರ ಸ್ಮರಣೆ ಅಮೃತ ಮಹೋತ್ಸವ ಜಯಂತಿ ಧಾರವಾಡ (ಕರ್ನಾಟಕ ವಾರ್ತೆ): ಧಾರವಾಡ ಗೋಲಿಬಾರ್ ಕಾರ್ಯಕ್ರಮದಲ್ಲಿ ಸಾವನ್ನಪ್ಪಿದ ಮೂವರು ಸ್ವಯಂಸೇವಕರ ಸ್ಮರಣಾರ್ಥವಾಗಿ 75 ನೇ ಸಾವಿನ ವಾರ್ಷಿಕೋತ್ಸವದ ಅಂಗವಾಗಿ ಜುಲೈ 1, 1921 ರಂದು ಹುತಾತ್ಮರ ದಿನವನ್ನು ಆಚರಿಸಲಾಯಿತು.  ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು, ಸ್ಥಳೀಯರಾದ ಶಂಕರ ಬಳ್ಳಗಟ್ಟಿ, ರಮೇಶ ನಾಯ್ಕ, ಶಂಕರ ಕುಂಬಿ, ಉದಯಕುಮಾರ ಯಂಡಿಗೇರಿ ಮತ್ತು ಶಕ್ತಿ ಹಿರೇಮಠ ಸಹ ಇದ್ದರು.

 

 

×
ABOUT DULT ORGANISATIONAL STRUCTURE PROJECTS