ಅಭಿಪ್ರಾಯ / ಸಲಹೆಗಳು

ರಾಷ್ಟ್ರಕವಿ ಕುವೆಂಪು ಜನ್ಮದಿನದಂದು ವಿಶ್ವಮಾನವ ದಿನದ ಅಂಗವಾಗಿ ನಡೆಸಲು ಉದ್ದೇಶಿಸಿರುವ ಕವನ ಸ್ಪರ್ಧೆಯ ವಿವರಗಳು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ರಾಜ್ಯದ ನೆಚ್ಚಿನ ಕವಿ, ಜ್ಞಾನಪೀಠ ಪ್ರಶಸ್ತಿ ಹಾಗೂ ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಡಿಸೆಂಬರ್ ೨೯,೨೦೨೧ ಕುವೆಂಪು ಜನ್ಮದಿನದಂದು ವಿಶ್ವಮಾನವ ದಿನದ ಅಂಗವಾಗಿ ನಡೆಸಲು ಉದ್ದೇಶಿಸಿರುವ ಕವನ ಸ್ಪರ್ಧೆಯ ವಿವರಗಳು ಇಂತಿವೆ:

ಸ್ವರಚಿತ ಕವನ ಸ್ಪರ್ಧೆ:

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತರಿಗೆ ಎರಡು ವಿಭಾಗಗಳಿದ್ದು,

೧) ಹದಿನೆಂಟರ ವಯೋಮಾನದವರೆಗೆ ಒಂದು ವಿಭಾಗ

೨) ಹದಿನೆಂಟರ ನಂತರದವರಿಗೆ ಮತ್ತೊಂದು ವಿಭಾಗವೆಂದು ಮಾಡಲಾಗಿದೆ.

ಬಹುಮಾನ:  ಎರಡೂ ವಿಭಾಗಗಳಿಗೆ ಬಹುಮಾನಗಳನ್ನು ನೀಡಲಾಗುತ್ತಿದ್ದು, ಕ್ರಮವಾಗಿ ಮೊದಲ ಬಹುಮಾನ ೩,೦೦೦/-,
ಎರಡನೆ ಬಹುಮಾನ ೨,೦೦೦/- ಹಾಗೂ ಮೂರನೇ ಬಹುಮಾನ ೧,೦೦೦/- ರೂಗಳನ್ನು ಪ್ರೋತ್ಸಾಹಪೂರ್ವಕವಾಗಿ ನೀಡಲಾಗುತ್ತದೆ.

ಈ ಸ್ಪರ್ಧೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದಾಗಿದ್ದು, ಕವನಗಳು ಸ್ವರಚಿತವಾಗಿದ್ದು ಕನ್ನಡ ಭಾಷೆಯಲ್ಲಿರಬೇಕು. ಯಾವುದೇ ಅನುವಾದ ಅಥವ ನಕಲು ಮಾಡಿದ್ದಾಗಿರಬಾರದು ಅಥವ ಕೃತಿ ಚೌರ್ಯವಾಗಿರಬಾರದು. ಫಾಂಟ್ ಸೈಜ್  ೧೨ ಪಿಕ್ಸೆಲ್ ನಲ್ಲಿದ್ದು ಲೈನ್ ಹೈಟ್ ೧.೫ ಇರಬೇಕು, ಮತ್ತು ಯೂನಿಕೋಡ್ ನಲ್ಲಿರಬೇಕು.

ನಿಬಂಧನೆಗಳು:

* ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಗೂಗಲ್ ಸ್ಪೆçಡ್ ಶೀಟ್ ಮೂಲಕವೇ ನೊಂದಾಯಿಸಿಕೊAಡು ತಮ್ಮ ವಿವರಗಳನ್ನು ನೀಡಿ ತಾವು ರಚಿಸಿದ ಕೃತಿಗಳನ್ನು (ಪಿ.ಡಿ.ಎಫ್. ಫಾರ್ಮ್ಯಾಟ್-ನಲ್ಲಿ ಮಾತ್ರ) ಸ್ಪರ್ಧೆಗೆ ಕಳುಹಿಸಬೇಕು.  ಇಲಾಖೆ ನೀಡುವ ಗೂಗಲ್ ಫಾರ್ಮ್-ನಲ್ಲಿ  ನೊಂದಾಯಿಸಿಕೊAಡು ಅರ್ಜಿ ಸಲ್ಲಿಸಬಹುದು. ತಮ್ಮ ವಯಸ್ಸಿನ ದೃಢೀಕರಣವನ್ನು ನೀಡಬೇಕು. ಎಸ್.ಎಸ್.ಎಲ್.ಸಿ ಅಂಕಪಟ್ಟಿ ಮತ್ತು ವೋಟರ್ ಐಡಿ ನೀಡಬಹುದು.

* ಈ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಶಾಲಾ/ಕಾಲೇಜಿನಿಂದ ದೃಢೀಕರಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಪ್ರವೇಶಾತಿ ಸಲ್ಲಿಕೆ:

* ಎಲ್ಲಾ ಪ್ರವೇಶಾತಿಗಳ ನೊಂದಣಿಕೊಂಡಿ ನಮ್ಮ ಅಧಿಕೃತ  ವೆಬ್ ಸೈಟ್ ನಲ್ಲೂ ಲಭ್ಯವಿರುತ್ತದೆ. www.kannadasiri.karnataka.gov.in

* ಬೇರಾವ ಮಾಧ್ಯಮದಲ್ಲಿ ಸಲ್ಲಿಸಿದರೂ ಸ್ವೀಕರಿಸಲಾಗುವುದಿಲ್ಲ.

* ಕವನಗಳು, ನಾಟಕ ವಿಮರ್ಶೆ, ಪ್ರಬಂಧ ಸ್ಪರ್ಧೆ ಎಲ್ಲವೂ ಕನ್ನಡದಲ್ಲೇ ಇರಬೇಕು.

* ಸ್ಪರ್ಧೆಗಳಲ್ಲಿ ಭಾಗವಹಿಸುವವರು ತಮ್ಮ ಸಲ್ಲಿಕೆಯೊಂದಿಗೆ ಕೆಳಗಿನ ವಿವರಗಳನ್ನು ನೀಡಬೇಕು.

೧. ಹೆಸರು, ೨. ವಿಳಾಸ, ೩. ವಯಸ್ಸು, ೪. ಸಂಪರ್ಕ ಸಂಖ್ಯೆ, ೫. ಇ ಮೇಲ್ ಐಡಿ

* ತೀರ್ಪುಗಾರರ ತೀರ್ಮಾನವೇ ಅಂತಿಮ.

* ತಮ್ಮದೇ ಕೃತಿಯೆಂದು ಬರಹಗಾರರು ಸ್ವ-ದೃಢೀಕರಣ ನೀಡಬೇಕು ಮತ್ತು ಅದಕ್ಕೆ ಸ್ಪರ್ಧಿಗಳೇ ಜವಾಬ್ದಾರರಾಗಿರುತ್ತಾರೆ.

* ಪ್ರವೇಶಾತಿಗಳನ್ನು ಸಲ್ಲಿಸಲು ಕೊನೆಯ ದಿನ ಜನವರಿ ೫, ೨೦೨೨

* ಬಹುಮಾನಗಳನ್ನು ಜನವರಿ ೧೪,೨೦೨೨ ರಂದು ನೀಡಲಾಗುವುದು.

ಮಾಹಿತಿಗಳು ಅಪೂರ್ಣವಾಗಿದ್ದಲ್ಲಿ ಪ್ರವೇಶಾತಿಗಳನ್ನು ಸ್ವೀಕರಿಸಲಾಗುವುದಿಲ್ಲ. ಈ ಸ್ಪರ್ಧೆಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಂಬಂಧಪಟ್ಟವರು ಅಥವ ಅವರ ಕುಟುಂಬ ವರ್ಗದವರು ಸ್ಪರ್ಧಿಸುವಂತಿಲ್ಲ.

 

https://docs.google.com/forms/d/1qQ6BPV8AFOdnwex7SJhlihs6c8jL3rI-aVaz1XI1gVE/

 

 

ಇತ್ತೀಚಿನ ನವೀಕರಣ​ : 24-12-2021 05:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080