ಅಭಿಪ್ರಾಯ / ಸಲಹೆಗಳು

"ಕನ್ನಡಕ್ಕಾಗಿ ನಾವು" ಅಭಿಯಾನದ ಅಂಗವಾಗಿ ಇಲಾಖೆ ಆಯೋಜಿಸಿರುವ ಗೀತಗಾಯನ ಕಾರ್ಯಕ್ರಮದ ವಿವರ

ಕನ್ನಡಕ್ಕಾಗಿ ನಾವು - ಲಕ್ಷ ಕಂಠಗಳ ಗೀತಗಾಯನ

"ಕನ್ನಡಕ್ಕಾಗಿ ನಾವು" ಅಭಿಯಾನದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಕ್ಟೋಬರ್ 28 ಗುರುವಾರ ಬೆಳಗ್ಗೆ 11 ಗಂಟೆಗೆ ಆಯೋಜಿಸಿರುವ ಗೀತಗಾಯನ ಕಾರ್ಯಕ್ರಮದಲ್ಲಿ ತಾವುಗಳು ಭಾಗವಹಿಸಲು ಅಗತ್ಯ ಮಾಹಿತಿಗಳನ್ನು ಕೆಳಕಂಡ ಕೊಂಡಿಯ ಮೂಲಕ ನೋಂದಣಿ ಮಾಡಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ.

https://tinyurl.com/36k9m5dv

ಈ ನೋಂದಣಿ ಪ್ರಕ್ರಿಯೆ ಅಕ್ಟೋಬರ್ 25ರ ಬೆಳಗ್ಗೆ 11 ಗಂಟೆಯಿಂದ ಆರಂಭಗೊಂಡು ಅಕ್ಟೋಬರ್ 27ರ ರಾತ್ರಿ 11 ಗಂಟೆಯವರೆಗೆ ತೆರೆದಿರುತ್ತದೆ.

ನೋಂದಣಿಗಾಗಿ ಮಾರ್ಗಸೂಚಿಗಳು:

* ಗೀತಗಾಯನಕ್ಕೆ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ.
* ಅಭ್ಯಾಸಕ್ಕೆ ಹಾಡಿನ ಟ್ರ್ಯಾಕ್ ಲಭ್ಯವಿದೆ.
* ಗೀತಗಾಯನಕ್ಕಾಗಿ ಹಾಡುವ ಹಾಡಿನ ಟ್ರ್ಯಾಕ್ ಗಾಗಿ ಈ ಕೆಳಗಿನ ಕೊಂಡಿಯನ್ನು ಒತ್ತಿ. 
   https://youtube.com/playlist?list=PLBCy399y7VQpDbqZifV43RBn4maJqFdzr
* ಸಂಘಸಂಸ್ಥೆಗಳ ಮೂಲಕ ಹಾಡಿದವರಿಗೆ ಆಯಾ ಸಂಘ ಸಂಸ್ಥೆಯ ಹೆಸರಿನಲ್ಲಿ ಒಂದು ಪ್ರಶಸ್ತಿ ಪತ್ರ ನೀಡಲಾಗುವುದು. ವೈಯಕ್ತಿಕ ಪ್ರಶಸ್ತಿ ಪತ್ರಕ್ಕೆ ನೋಂದಣಿ ಮತ್ತು ಅವರು ನಾವು ನೀಡಿರುವ ಜಾಲತಾಣಕ್ಕೆಅಪ್ ಲೋಡ್ ಮಾಡುವುದು ಕಡ್ಡಾಯ.
* ದಿನಾಂಕ 28.10.2021 ರಂದು ತಾವು ಹಾಡಿದ ಹಾಡುಗಳ ಅಪ್ಲೋಡಿಂಗ್ ಅನ್ನು 29ನೇ ತಾರೀಕು ರಾತ್ರಿ 11:00 ಗಂಟೆ ಒಳಗಾಗಿ ಪೂರ್ಣಗೊಳಿಸಬೇಕು.
* ಈ ಮೂರು ಹಾಡುಗಳನ್ನು ಗೀತಗಾಯನಕ್ಕಾಗಿ ಆಯ್ಕೆ ಮಾಡಲಾಗಿದೆ.
    1. ಬಾರಿಸು ಕನ್ನಡ ಡಿಂಡಿಮವ
    2. ಜೋಗದ ಸಿರಿ ಬೆಳಕಿನಲ್ಲಿ
    3. ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು.
* ನಿಮ್ಮ ಗೀತಗಾಯನದ ವಿಡಿಯೋಗಳನ್ನು ಅಪ್ಲೋಡ್ ಮಾಡುವಾಗ ಈ ಕೆಳಗಿನ ಹ್ಯಾಶ್ ಟ್ಯಾಗ್ ಗಳನ್ನು ಬಳಸಿ.
#ಗೀತಗಾಯನ #geetagayana #londonworldrecords #lwr #limcabookofrecords #guinessrecords #Indianbookofrecords 

 

ಅಕ್ಟೋಬರ್ 28ರ ಬೆಳಗ್ಗೆ 11 ಗಂಟೆಗೆ ಗೀತಗಾಯನ ಕಾರ್ಯಕ್ರಮದ ನಂತರ ತಮ್ಮ ಗೀತಗಾಯನದ ವಿಡಿಯೋಗಳ ಕೊಂಡಿಗಳನ್ನು ಈ ಕೆಳಕಂಡ ಕ್ಯೂ ಆರ್ ಕೋಡ್ ಮೂಲಕ ಅಥವಾ ಈ ಕೆಳಕಂಡ ಕೊಂಡಿಯ ಮೂಲಕ ನಮೂದಿಸಲು ಕೋರಲಾಗಿದೆ. 
https://tinyurl.com/mcurjn39 

ಅಕ್ಟೋಬರ್ 29ರ ರಾತ್ರಿ 11 ಗಂಟೆಯವರೆಗೆ ಈ ಕೊಂಡಿ ಲಭ್ಯವಿರುತ್ತದೆ.

 

 

ನಾವೆಲ್ಲರೂ ಈ ಸಾಮೂಹಿಕ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು "ಕನ್ನಡಕ್ಕಾಗಿ ನಾವು" ಅಭಿಯಾನವನ್ನು ಯಶಸ್ವಿಗೊಳಿಸೋಣ.

 

 

 

ಇತ್ತೀಚಿನ ನವೀಕರಣ​ : 26-10-2021 07:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080